ಮೇಜರ್ ಮಂಗೇರಿರ ಚಿನ್ನಪ್ಪ ಮುತ್ತಣ್ಣ ಭಾರತದ ಓರ್ವ ಯುದ್ಧ ವೀರ. == ಆರಂಭಿಕ ಜೀವನ == ಮಂಗೇರಿರ ಚಿನ್ನಪ್ಪ ಮುತ್ತಣ್ಣ ಅವರು ೨೧ ಏಪ್ರಿಲ್ ೧೯೬೪ ರಲ್ಲಿ ಕೊಡಗು ಜಿಲ್ಲೆಯ ( ಭಾಗಮಂಡಲದ ಬಳಿ) ಚೆಟ್ಟಿಮನಿ ಗ್ರಾಮದಲ್ಲಿ ಜನಿಸಿದರು. == ಸೇನಾ ಸೇವೆ == ಅವರು ಅಕ್ಟೋಬರ್ ೧೯೮೪ ರಲ್ಲಿ ಚೆನ್ನೈನ ಒಟಿಎಗೆ ಸೇರಿದರು ಮತ್ತು ೨೪ ಅಕ್ಟೋಬರ್ ೧೯೮೫ ರಲ್ಲಿ ೫ ನೇ ಬೆಟಾಲಿಯನ್ ದಿ ಸಿಖ್ ಲೈಟ್ ಇನ್‌ಫಾಂಟ್ರಿಗೆ ನಿಯೋಜಿಸಲ್ಪಟ್ಟರು. ಅವರು ೫ ಸಿಖ್ ಲೈಟ್ ಇನ್‌ಫಾಂಟ್ರಿ-ಎಚ್‌ಕ್ಯೂ - ೧ ಸೆಕ್ಟರ್ ರಾಷ್ಟ್ರೀಯ ರೈಫಲ್ಸ್‌ಗೆ ಸೇವೆ ಸಲ್ಲಿಸಿದರು. ಅವರು ೧೨ ಜನವರಿ ೨೦೦೦ ರಲ್ಲಿ, ತಮ್ಮ ೩೬ ನೇ ವಯಸ್ಸಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಭಯೋತ್ಪಾದಕರೊಂದಿಗೆ ಹೋರಾಡುತ್ತಿರುವಾಗ ಮೃತರಾದರು. == ಮರಣೋತ್ತರ ಗೌರವ == ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಸ್ಮರಣಾರ್ಥ ಮಡಿಕೇರಿ ನಗರದ ಪುರಸಭೆಯ (ಸಿಎಂಸಿ) ಮುಂಭಾಗದಲ್ಲಿ ಹುತಾತ್ಮರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು ಮತ್ತು ಟೌನ್ ಹಾಲ್ ಮುಂಭಾಗದ ಪುರಸಭೆಯ ವೃತ್ತಕ್ಕೆ ೯ ಡಿಸೆಂಬರ್ ೨೦೧೦ ಗುರುವಾರದಂದು ಅವರ ಹೆಸರನ್ನು ಇಡಲಾಯಿತು. ಶಿಲ್ಪಿ ಮಂಜುನಾಥ ಆಚಾರ್ಯ ಅವರಿಂದ ೮ ಲಕ್ಷ ರೂ . ವೆಚ್ಚದಲ್ಲಿ ಈ ಮೂರ್ತಿಯನ್ನುಸೋಮವಾರಪೇಟೆಯ ಬೀಟಿಕಟ್ಟೆಯಲ್ಲಿ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಯಿತು. ಆನಂತರದಲ್ಲಿ, ಯೋಧನನ್ನು ನೇಮಿಸಿದ ಅನಂತನಾಗ್ ಜಿಲ್ಲಾ ಕೇಂದ್ರದ ೧ ಸೆಕ್ಟರ್ ಆರ್‌ಆರ್ ಅಡಿಯಲ್ಲಿ ನಿರ್ವಹಿಸಲಾಗುತ್ತಿದ್ದ ಪ್ರೌಢಶಾಲೆಯನ್ನು ಮುತ್ತಣ್ಣ ಆರ್ಮಿ ಸದ್ಭಾವನಾ ಶಾಲೆ ಎಂದು ಮುತ್ತಣ್ಣ ಅವರ ಹೆಸರಿನಲ್ಲಿ ಮರುನಾಮಕರಣ ಮಾಡಲಾಯಿತು. == ಉಲ್ಲೇಖಗಳು ==